ವಿಕಾಸಂ ಪರಿಚಯ

ವಿತ್ತೀಯ ಕಾರ್ಯನೀತಿ ಸಂಸ್ಥೆಯನ್ನು ಸರ್ಕಾರವು 2007 ಸ್ಥಾಪಿಸಿತು. ವಿತ್ತೀಯ ಕಾರ್ಯನೀತಿ ಸಂಸ್ಥೆಯನ್ನು ಸ್ಥಾಪಿಸುವುದರ ಮೂಲಕ ಕರ್ನಾಟಕ ಸರ್ಕಾರವು ವಿತ್ತೀಯ ಹೊಣೆಗಾರಿಕೆ ಕಾಯ್ದೆಯನ್ನು -2002 ಸಾಂಸ್ಥೀಕರಿಸುವ ಬದ್ಧತೆಯನ್ನು ತೋರಿಸಿತು. ವಿತ್ತೀಯ ಕಾರ್ಯನೀತಿ ಸಂಸ್ಥೆಯ ಚಟುವಟಿಕೆಗಳು ಮತ್ತು ಸೇವೆಗಳು, ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ, 2002ರ 4ನೇ ಪ್ರಕರಣದ ಉಪಬಂಧಗಳ ಮೇರೆಗಿನ ವಿತ್ತೀಯ ನಿರ್ವಹಣೆಯ ಹದಿನೇಳು ತತ್ವಗಳ ಆಶಯವನ್ನು ಅಳವಡಿಸಿಕೊಳ್ಳುವುದನ್ನು ಅಪೇಕ್ಷಿ¸ಸುತ್ತದೆ. ಹೆಚ್ಚು ಓದಲು....

ನಿರ್ದೇಶಕರ ಸಂದೇಶ

ವಿತ್ತೀಯ ಕಾರ್ಯನೀತಿ ಸಂಸ್ಥೆ (ವಿಕಾಸಂ) ಯ ನಿರ್ದೇಶಕನಾಗಿ ಸೇವೆ ಸಲ್ಲಿಸಲು ನನಗೆ ನೀಡಲಾದ ಅವಕಾಶವು ಒಬ್ಬ ಸಾರ್ವಜನಿಕ ಅಧಿಕಾರಿಗೆ ತನ್ನ ವೃತ್ತಿಜೀವನದಲ್ಲಿ ಸಿಗಬಹುದಾದ ಅಪರೂಪದ ಸೌಭಾಗ್ಯ ಎಂದು ಭಾವಿಸುತ್ತೇನೆ. 'ವಿಕಾಸಂ' ಅಸ್ತಿತ್ವಕ್ಕೆ ಬಂದು ಅತ್ಯಂತ ಕ್ಲುಪ್ತ ಸಮಯದಲ್ಲಿ ಕರ್ನಾಟಕ ರಾಜ್ಯದೊಳಗೆ ಮತ್ತು ಹೊರರಾಜ್ಯಗಳಲ್ಲಿಯೂ ಪ್ರಸಿದ್ಧಿ ಪಡೆದಿದೆ. ಈ ಸಂಸ್ಥೆಯು ಸಮಾಜದ ಬೌದ್ಧಿಕವಲಯದ ಪರಿಣಿತರು ಹಾಗೂ ಸರ್ಕಾರ ಅದರಲ್ಲೂ ಪ್ರಮುಖವಾಗಿ ಹಣಕಾಸು ಇಲಾಖೆ ಇವುಗಳ ನಡುವಿನ ಮುಖಾಮುಖಿಗಾಗಿ ಇರುವ ಒಂದು ವೇದಿಕೆಯಾಗಿದೆ. ವಿತ್ತೀಯ ಕಾರ್ಯನೀತಿ ಹಾಗೂ ಅವಶ್ಯಕ ಸುಧಾರಣಾ ಕ್ರಮಗಳೂ ಸೇರಿದಂತೆ ಆಯವ್ಯಯ ವರದಿ ರೂಪಿಸುವಲ್ಲಿ ಮೌಲ್ಯಯುತವಾದ ಕೊಡುಗೆಗಳನ್ನು ನೀಡುವುದರಲ್ಲಿ 'ವಿಕಾಸಂ' ಅತ್ಯಂತ ಮಹತ್ವದ ಪಾತ್ರವಹಿಸುತ್ತದೆ. ಜೊತೆಗೆ ಪರಿಣಾಮಕಾರಿ ಆಡಳಿತ ಹಾಗೂ ಸೇವೆಗಳ ದಕ್ಷ ಪೂರೈಕೆಗೆ ಅವಶ್ಯಕವಾದ ಬಲಸಂವರ್ಧನೆಗಾಗಿ ತರಬೇತಿ ನೀಡಬೇಕಾದ ಜವಾಬ್ದಾರಿಯನ್ನು ವಿಧಿಸಲಾಗಿದೆ. ಇಂತಹ ಜವಾಬ್ದಾರಿಯುತ ಸಂಸ್ಥೆಯನ್ನು ಮುನ್ನಡೆಸುವುದು ಗುರುತರ ಹೊಣೆಗಾರಿಕೆಯ ಹಾಗೂ ಸವಾಲಿನ ಕಾರ್ಯವಾಗಿದೆ. ತಮ್ಮೆಲ್ಲರ ಸಂಪೂರ್ಣ ಬೆಂಬಲದಿಂದ 'ವಿಕಾಸಂ' ಎಲ್ಲಾ ಭಾಗೀದಾರರ ನಿರೀಕ್ಷೆಗಳನ್ನು ಈಡೇರಿಸುತ್ತದೆಂದು ಆಶಿಸುತ್ತೇನೆ. ಹೆಚ್ಚು ಓದಲು....


aarthika image‘ಆರ್ಥಿಕ ಚರ್ಚೆ’ – ಅರ್ಥಶಾಸ್ತ್ರ ಮತ್ತು ಆಡಳಿತದ ಕುರಿತ ವಿಕಾಸಂನ ಪತ್ರಿಕೆ ಸಂಪುಟ – 2 ಸಂಖ್ಯೆ – 2 / ಜುಲೈ – ಡಿಸೆಂಬರ್ 2017 new



ವಿಕಾಸಂನ ಪತ್ರಿಕೆಗೆ ಲೇಖನಗಳ ಕೊಡುಗೆಗಾಗಿ ಮಾರ್ಗಸೂಚಿ



2018-2019ನೇ ಸಾಲಿನ ಪ್ರಶಿಕ್ಷಣ ಕಾರ್ಯಕ್ರಮ

  • ವಿತ್ತೀಯ ಕಾರ್ಯನೀತಿ ಸಂಸ್ಥೆ (ವಿಕಾಸಂ)ಯ 2018-2019ನೇ ಸಾಲಿನ ಪ್ರಶಿಕ್ಷಣ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ new
  • ವಿತ್ತೀಯ ಕಾರ್ಯನೀತಿ ಸಂಸ್ಥೆ (ವಿಕಾಸಂ)ಯ ಪ್ರಶಿಕ್ಷಣ ಕಾರ್ಯಕ್ರಮಕ್ಕೆ ಅರ್ಜಿ ನಮೂನೆ (Internship) new
  • ಸುದ್ದಿ ಮತ್ತು ಘಟನೆಗಳು

    Stop

    • 05-05-2018 ರಂದು ಶ್ರೀ ಮಾನಕ್ ಸಿ ಸಿಂಘಿ (ಐ.ಇ.ಎಸ್ ನಿವೃತ್ತಿ) ಕರ್ನಾಟಕ ಸರ್ಕಾರದ 15ನೇ ಆರ್ಥಿಕ ಆಯೋಗದ ಡ್ರಾಫ್ಟ್ ಮೆಮೊರಾಂಡಮ್ ಸಲಹೆಗಾರರು, ಅವರಿಂದ ಎಫ್.ಪಿ.ಐ ಸಿಬ್ಬಂದಿಯವರ ಜೊತೆ ಸಂವಹನ. new
    • ವಿತ್ತೀಯ ಕಾರ್ಯನೀತಿ ಸಂಸ್ಥೆಯು ಶೈಕ್ಷಣಿಕ ಸಹಯೋಗ ಮತ್ತು ಜ್ಞಾನ ವಿನಿಮಯಕ್ಕಾಗಿ ರಾಷ್ಟ್ರೀಯ ಸಾರ್ವಜನಿಕ ಹಣಕಾಸು ಮತ್ತು ನೀತಿ ಸಂಸ್ಥೆ (NIPFP) ಯೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡಿದೆ. new
    • ಲಿಂಗಾಧಾರಿತ ಲೆಕ್ಕಪರಿಶೋಧನೆಗಳ ಅನುಕೂಲಕರಣ ತರಬೇತಿ ಕಾರ್ಯಕ್ರಮ - 21 ಮೇ 2018 ರಿಂದ 24 ಮೇ 2018 . new
    • ವಿತ್ತೀಯ ಕಾರ್ಯನೀತಿ ಸಂಸ್ಥೆ (ವಿಕಾಸಂ)ಯ 2018-2019ನೇ ಸಾಲಿನ ಪ್ರಶಿಕ್ಷಣ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ new
    • ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಪರೀಕ್ಷಾರ್ಧ ಸಹಾಯಕ ನಿಯಂತ್ರಣಾಧಿಕಾರಿಗಳಿಗೆ ಮೂಲ ಸಮಗ್ರ ಹಣಕಾಸಿನ ತರಬೇತಿ ಕಾರ್ಯಕ್ರಮ - 22ನೇ ಮೇ 2018 ರಿಂದ 01ನೇ ಜೂನ್ 2018 new
    • ಕರ್ನಾಟಕ ಸರ್ಕಾರ ವಾಣಿಜ್ಯ ತೆರಿಗೆ ಇಲಾಖೆಯ ಮಾಸ್ಟರ್ ತರಬೇತಿದಾರರಿಗೆ ಹಾಗೂ ಇತರೆ ಅಧಿಕಾರಿಗಳಿಗೆ ಸರಕು ಮತ್ತು ಸೇವಾ ತೆರಿಗೆ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮ – 22ನೇ ಮೇ 2018 new
    • ಕರ್ನಾಟಕ ಸರ್ಕಾರ ವಾಣಿಜ್ಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸರಕು ಮತ್ತು ಸೇವಾ ತೆರಿಗೆ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮ – 23ನೇ ಮೇ 2018 new
    • ಕರ್ನಾಟಕ ರಾಜ್ಯ ಖಜಾನೆ ಇಲಾಖೆಯ ಅಧಿಕಾರಿಗಳಿಗೆ ಖಜಾನೆ2 ರ ಕಾರ್ಯಾಚರಣೆ ಕುರಿತು ತರಬೇತಿ ಕಾರ್ಯಕ್ರಮ ( 3ನೇ ಬ್ಯಾಚ್ ) - 24 ರಿಂದ 25 ನೇ ಮೇ 2018
    • new