ವಿತ್ತೀಯ ಕಾರ್ಯನೀತಿ ಸಂಸ್ಥೆ

ವಿತ್ತೀಯ ಕಾರ್ಯನೀತಿ ಸಂಸ್ಥೆಯಲ್ಲಿ 5 ಕೇಂದ್ರಗಳಿವೆ:

1. ಸಾರ್ವಜನಿಕ ಸಂಪನ್ಮೂಲ ನಿರ್ವಹಣೆ

2. ಯೋಜನೆ, ಮಾಹಿತಿ ತಂತ್ರಜ್ಞಾನ ಮತ್ತು ಸಂಖ್ಯಾಶಾಸ್ತ್ರ

3. ಯೋಜನಾ ನಿರ್ವಹಣೆ

4.  ಸಾರ್ವಜನಿಕ ವೆಚ್ಚ ನಿರ್ವಹಣೆ

5.  ಆರ್ಥಿಕ ಹೊಣೆಗಾರಿಕೆ ಮತ್ತು ವಿಕೇಂದ್ರಿಕರಣ

 

ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಸಾರ್ವಜನಿಕ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಬೋಧಕವರ್ಗವಾಗಿ ತೆಗೆದುಕೊಳ್ಳಲಾಗುತ್ತಿದ್ದು, ಅವರು ಸಮಗ್ರ ಭಾರತದ ದೃಷ್ಟಿಕೋನ, ತಮ್ಮ ಕ್ಷೇತ್ರದ ಸೂಕ್ಷ್ಮ ಕಾರ್ಯಾಚರಣೆಗಳ ಒಳನೋಟವನ್ನು ಪ್ರದರ್ಶಿಸುವ ಸಾಮಥ್ರ್ಯ ಮತ್ತು ಸಾಂಸ್ಥಿಕ ಜ್ಞಾನವನ್ನು ಹೊಂದಿದವರಾಗಿರುತ್ತಾರೆ. ಅವರನ್ನು ಸರ್ಕಾರದ ವ್ಯವಸ್ಥೆಯ ಹೊರಗಿನಿಂದ ತೆಗೆದುಕೊಂಡ ಸಂಶೋಧಕರು ಮತ್ತು ವೃತ್ತಿಪರ ತರಬೇತಿದಾರರುಗಳನ್ನೊಳಗೊಂಡ ಅನಿಶ್ಚಿತ ತಂಡಗಳನ್ನಾಗಿ (fluid teams) ರಚಿಸಲಾಗುತ್ತದೆ. ಈ ತಂಡಗಳು ಶೈಕ್ಷಣಿಕ ಮತ್ತು ವಿಶ್ಲೇಷಣಾತ್ಮಕ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವುದರೊಂದಿಗೆ ಪರಿಹಾರೋಪಾಯ, ಕಾರ್ಯಕ್ರಮ, ಯೋಜನೆ ಮತ್ತು ನೀತಿಗಳನ್ನು ಆಂತರೀಕರಣಗೊಳಿಸುವಲ್ಲಿ ಬಳಕೆದಾರ ಇಲಾಖೆಗಳು ಮತ್ತು ಗ್ರಾಹಕರಿಗೆ ಸಹಾಯ ನೀಡುತ್ತವೆ. ನಿರ್ದೇಶಕರ ನೇತೃತ್ವದಲ್ಲಿ ಬೋಧಕವರ್ಗದವರು ಕಾರ್ಯ ನಿರ್ವಹಿಸುತ್ತಿದ್ದಾರೆ. ನಿರ್ದೇಶಕರು ಉತ್ಕøಷ್ಟವಾದ ಶೈಕ್ಷಣಿಕ ಹಿನ್ನಲೆ ಹೊಂದಿರುವ ವ್ಯಕ್ತಿಯಾಗಿದ್ದು, ಸಮಗ್ರ ಅರ್ಥಶಾಸ್ತ್ರ ಮತ್ತು ವಿತ್ತೀಯ ಸಮಸ್ಯೆಗೆ ಸಂಬಂಧಿಸಿದ ಆಯವ್ಯಯ ನಿರ್ವಹಣೆಯಲ್ಲಿ ವಿಸ್ತøತ ಅನುಭವ ಉಳ್ಳವರಾಗಿರುತ್ತಾರೆ.

       ವಿಕಾಸಂನಲ್ಲಿ ಒಟ್ಟು 15 ಬೋಧಕ ವರ್ಗದ ಹುದ್ದೆಗಳಿವೆ. ಈ ಎಲ್ಲಾ ಹುದ್ದೆಗಳನ್ನು ನಿಯೋಜನೆ ಅಥವಾ ಗುತ್ತಿಗೆ ಆಧಾರದಲ್ಲಿ ತುಂಬಲಾಗುತ್ತದೆ. ಈ ಬೋಧಕ ವರ್ಗದ ಕನಿಷ್ಠ ಅರ್ಹತೆ ಸ್ನಾತಕೋತ್ತರ ಪದವಿಯಾಗಿದ್ದು, ಪಿಜಿ. ಡಿಪ್ಲೊಮಾ ಎಂ.ಫಿಲ್, ಪಿಎಚ್‍ಡಿ ಅಥವಾ ಡಾಕ್ಟರೇಟ್ ಪದವಿ ಆನಂತರದ ವಿದ್ಯಾರ್ಹತೆಗಳನ್ನು ಹೊಂದಿದವರಿಗೆ ಅಥವಾ ವೃತ್ತಿಪರ ವಿದ್ಯಾರ್ಹತೆಗಳಾದ ಎಲ್‍ಎಲ್‍ಬಿ, ಎಂಬಿಎ, ಬಿ.ಟೆಕ್, ಸಿ.ಎ ಮಾಡಿದವರಿಗೆ ಆದ್ಯತೆ ನೀಡಲಾಗುತ್ತದೆ. ಎಲ್ಲಾ ಬೋಧಕ ವರ್ಗದವರು ತರಬೇತಿ ಅಥವಾ ಸಂಶೋಧನೆ ಅಥವಾ ಪ್ರಕಾಶನ ಅಥವಾ ಯೋಜನಾ ನಿರ್ವಹಣೆಯ ಸಿದ್ಧ ದಾಖಲೆಯಲ್ಲಿ ಅನುಭವ ಹೊಂದಿದ್ದಾರೆ.