ವಿತ್ತೀಯ ಕಾರ್ಯನೀತಿ ವಿಶ್ಲೇಷಣಾ ಕೋಶ (ವಿಕಾವಿಕೋ)

ವಿಕಾವಿಕೋವು ರಾಜ್ಯ ಸರ್ಕಾರದಲ್ಲಿ ಮಾಹಿತಿಯಾಧಾರಿತ ನಿರ್ಣಯ ಕೈಗೊಳ್ಳುವಿಕೆಗೆ ಉತ್ತೇಜಿಸಲು ಇರುವ ಪ್ರಮುಖ ಸಾಂಸ್ಥಿಕ ರಚನೆಯಾಗಿದೆ. ವಿತ್ತೀಯ ನೀತಿಯ ತತ್ಕ್ಷಣದ ಮತ್ತು ದೀರ್ಘಕಾಲೀನ ಪರಿಣಾಮಗಳು, ಯೋಜನೆಯ ಅವಧಿಯಲ್ಲಿ ಸಾರ್ವಜನಿಕ ಸಂಪನ್ಮೂಲಗಳ ಕ್ರೋಢೀಕರಣ, ಹಂಚಿಕೆ ಮತ್ತು ಬಳಕೆ ಕುರಿತ ಕಾರ್ಯವಿಧಾನ ಮತ್ತು ನಿಯಂತ್ರಕ ನಿರ್ಧಾರಗಳ ಬಗೆಗೆ ನಿರಂತರವಾಗಿ ಮೌಲ್ಯಮಾಪನ ಕೈಗೊಳ್ಳುವುದು ಇದರ ಪ್ರಥಮ ಆದ್ಯತೆಯಾಗಿದೆ. ಈ ಘಟಕ ವಿಶ್ಲೇಷಣಾತ್ಮಕ ಮೆದುಳಿನ ರೀತಿ ಕಾರ್ಯನಿರ್ವಹಿಸುತ್ತಿದ್ದು, ಚಾಲ್ತಿಯಲ್ಲಿರುವ ಸುಧಾರಣಾ ಕಾರ್ಯಕ್ರಮಗಳಿಗೆ ಮಾಹಿತಿ ಮತ್ತು ವಿಶ್ಲೇಷಣಾತ್ಮಕ ಬೆಂಬಲ ನೀಡುತ್ತದೆ. ಯುಎಸ್ಎಐಡಿ ನೆರವಿನ ರಾಜ್ಯದ ವಿತ್ತೀಯ ಸುಧಾರಣಾ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವುದಕ್ಕೆ ವಿಕಾವಿಕೋ ಕೇಂದ್ರಬಿಂದುವಾಗಿದೆ.

 

ಯುಎಸ್ಎಐಡಿ/ ಭಾರತದ ಸುಧಾರಣಾ ಯೋಜನೆಯ 5 ಸಂಪುಟಗಳು:

 

ಸಂಪುಟ I       ಸುಧಾರಣಾ ಯೋಜನೆ: ಸ್ಥೂಲ ಪರಿಚಯ
ಸಂಪುಟ II ವೆಚ್ಚ ಯೋಜನೆ ಮತ್ತು ನಿರ್ವಹಣಾ ವೃತ್ತಿಪರರ ಮಾರ್ಗದರ್ಶಿ – ಭಾರತೀಯ ರಾಜ್ಯಮಟ್ಟದ ಕಾರ್ಯಕ್ರಮ ಮತ್ತು ಸಾಧನಾ ಆಯವ್ಯಯದ ಪರಿಚಯ  
ಸಂಪುಟ III                    ಕಂದಾಯ ನಿರ್ವಹಣಾ ವೃತ್ತಿಪರರ ಮಾರ್ಗದರ್ಶಿ
ಸಂಪುಟ IV ಸಾಲ ಮತ್ತು ಹೂಡಿಕೆ ನಿರ್ವಹಣಾ ವೃತ್ತಿಪರರ ಮಾರ್ಗದರ್ಶಿ
ಸಂಪುಟ V ಯೋಜನಾ ಮೌಲ್ಯನಿರ್ಣಯ ವೃತ್ತಿಪರರ ಮಾರ್ಗದರ್ಶಿ