ಪ್ರತಿಕ್ರಿಯೆ ವ್ಯವಸ್ಥೆ

ವಿತ್ತೀಯ ಕಾರ್ಯ ನೀತಿ ಸಂಸ್ಥೆಯು(ವಿಕಾಸಂ) ತರಬೇತಿ ಕಾರ್ಯಕ್ರಮಗಳ ಪ್ರಶಿಕ್ಷಣಾರ್ಥಿಗಳಿಂದ ಪ್ರತಿಕ್ರಿಯೆ ಪಡೆಯಲು ಆನ್ ಲೈನ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಪ್ರಶಿಕ್ಷಣಾರ್ಥಿಗಳು http://www.fiscalpolicyinstitute.in/. ಜಾಲತಾಣದಲ್ಲಿ ತಮ್ಮ ನೋಂದಣಿ ಮಾಡಿಕೊಳ್ಳಬಹುದು. ಆ ಬಳಿಕ ಬಳಕೆದಾರನ ಐಡಿ ಮತ್ತು ಪಾಸ್ವರ್ಡ್ ಲಭ್ಯವಾಗುತ್ತದೆ. ತರಗತಿಗಳನ್ನು ತೆಗೆದುಕೊಳ್ಳುವ ಸಂಪನ್ಮೂಲ ವ್ಯಕ್ತಿಗಳು / ಭೋಧಕರಿಗೆ ಸಹ ಒಂದು ಬಳಕೆದಾರರ ಸಂಕೇತ ನೀಡಲಾಗುತ್ತಿದ್ದು, ಇದನ್ನು ಉಪಯೋಗಿಸಿ ಅವರು ಪ್ರಶಿಕ್ಷಣಾರ್ಥಿಗಳ ಹಾಜರಿಯನ್ನು ದಾಖಲಿಸಬಹುದು. ಇದನ್ನು ಬಳಸಿ ಪ್ರತಿಯೊಂದು ತರಗತಿಯ ಬಳಿಕ ಪ್ರಶಿಕ್ಷಣಾರ್ಥಿಗಳು ತರಗತಿಯ ವಿಷಯದ ಬಗೆಗೆ ಮತ್ತು ಸಂಪನ್ಮೂಲ ವ್ಯಕ್ತಿಗಳ ಬಗೆಗೆ ಆನ್ ಲೈನ್ ನಲ್ಲಿ ತಮ್ಮ ಅಭಿಪ್ರಾಯವನ್ನು ನೀಡಬೇಕು. ತರಬೇತಿಯ ಕೊನೆಯಲ್ಲಿ ತರಬೇತಿಯ ಬಗೆಗಿನ ಪ್ರಶಿಕ್ಷಣಾರ್ತಿಗಳ ನಿರೀಕ್ಷೆಗಳು ಪೂರ್ಣಗೊಂಡಿದೆಯೇ ಎಂಬುದನ್ನು ಒಳಗೊಂಡಂತೆ ತಮ್ಮ ಒಟ್ಟಾರೆ ಅಭಿಪ್ರಾಯ ಮತ್ತು ತರಬೇತಿಯ ಪಠ್ಯಕ್ರಮವನ್ನು ಉತ್ತಮ ಪಡಿಸಲು ಸಲಹೆಗಳನ್ನು ನೀಡಬೇಕು. ಆಹಾರ ಪೂರೈಕೆ ವ್ಯವಸ್ಥೆ ಮತ್ತು ಸಂಸ್ಥೆಯ ಸ್ವಚ್ಛತೆಯ ನಿರ್ವಹಣೆ ಬಗೆಗೂ ಆನ್ ಲೈನ್ ನಲ್ಲಿ ಅಭಿಪ್ರಾಯವನ್ನು ಸಂಗ್ರಹಿಸಲಾಗುತ್ತದೆ.

ಪ್ರಶಂಸಾಪತ್ರಗಳು

  • ಈ ಕಾರ್ಯಕ್ರಮವು ಉತ್ತಮವಾದ ರೀತಿಯಲ್ಲಿ ಸಂಘಟಿತವಾಗಿದೆ ಮತ್ತು ಜ್ಞಾನ ದೊರೆಯಿತು……..ಶಿವಲಿಂಗಯ್ಯ, ಉಪ ಆಯುಕ್ತರು, ವಾಣಿಜ್ಯತೆರಿಗೆಇಲಾಖೆ
  • ವಾಣಿಜ್ಯ ತೆರಿಗೆ ಇಲಾಖೆಯ ಲೆಕ್ಕಪರಿಶೋಧನಾ ಅಧಿಕಾರಿಗಳ ದೃಷ್ಟಿಕೋನದಲ್ಲಿ ತರಬೇತಿಗೆ ಆಯ್ಕೆ ಮಾಡಿಕೊಳ್ಳಲ್ಲಾದ ವಿಷಯಗಳು ಉಪಯುಕ್ತವಾಗಿದೆ. ಹೆಚ್.ಜಿ. ಪವಿತ್ರ. ಉಪ ಆಯುಕ್ತರು, ವಾಣಿಜ್ಯತೆರಿಗೆಇಲಾಖೆ.
  • ತರಬೇತಿಯಲ್ಲಿ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಜ್ಞಾನಗಳೆರಡನ್ನು ನೀಡಿದ್ದರಿಂದ ಈ ರೀತಿಯ ತರಬೇತಿಯೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಖಂಡಿತವಾಗಿಯೂ ಅಧಿಕಾರಿಗಳಿಗೆ ಸಹಾಯವಾಗುತ್ತದೆ ಡಾ.ಜಗದೀಶ್. ಉಪನಿರ್ದೇಶಕರು, ಆರೋಗ್ಯಮತ್ತುಕುಟುಂಬಕಲ್ಯಾಣನಿರ್ದೇಶನಾಲಯ.
  • ತರಬೇತಿ ಉತ್ತಮವಾಗಿದ್ದು. ಎಕ್ಸೆಲ್ನಲ್ಲಿ ಹಲವಾರು ನಮೂನೆಯ ಮತ್ತು ಸೂತ್ರಗಳ ಬಳಕೆಯನ್ನು ಕಲಿಯಲು ಅವಕಾಶ ಕಲ್ಪಿಸಿತು. ಶಿಲ್ಪ. ಎಸ್. ಸಹಾಯಕನಿರ್ದೇಶಕರು, ಜಿಲ್ಲಾಅಂಕಿಅಂಶಗಳಕಛೇರಿ.