ಗ್ರಂಥಾಲಯದ ಕುರಿತ ಮಾಹಿತಿ

 

ಸ್ಥೂಲ ಪರಿಚಯ

ವಿತ್ತೀಯ ಕಾರ್ಯನೀತಿ ಸಂಸ್ಥೆ(ವಿಕಾಸಂ) ಸುಸಜ್ಜಿತ ಗ್ರಂಥಾಲಯವನ್ನು ಹೊಂದಿದೆ. ಗ್ರಂಥಾಲಯವು ಪರಿಣಿತ ಸಿಬ್ಬಂದಿಯನ್ನು ಹೊಂದಿದ್ದು, ಇದು ಓದುಗರ ಜ್ಞಾನವನ್ನು ವೃದ್ಧಿಸಲು ವಿಶಾಲ ಶ್ರೇಣಿಯ ಶೈಕ್ಷಣಿಕ ಸಂಪನ್ಮೂಲಗಳಾದ ಪುಸ್ತಕಗಳು, ನಿಯತ ಕಾಲಿಕೆಗಳು, ಆನ್ ಲೈನ್ ನಿಯತ ಕಾಲಿಕೆಗಳು, ದತ್ತಾಂಶ ಸಂಚಯಗಳು, ಹಳೆಯ ಸಂಪುಟಗಳು, ವರದಿಗಳು, ಸಿಡಿ/ಡಿವಿಡಿಗಳು ಮತ್ತು ಆಡಿಯೋ/ವಿಡಿಯೋ ಸಿಡಿಗಳನ್ನು ಹೊಂದಿದೆ. ತನ್ನ ಓದುಗರ ಮಾಹಿತಿಯ ಅಗತ್ಯಗಳನ್ನು ಪೂರೈಸುವ ಸಲುವಾಗಿ ಸಮಗ್ರ ಸಾಹಿತ್ಯದ ಸಂಗ್ರಹವನ್ನು ಪ್ರಧಾನವಾಗಿ ತೆರಿಗೆ, ಸಾರ್ವಜನಿಕ ವೆಚ್ಚ ನಿರ್ವಹಣೆ, ಹೂಡಿಕೆ ಮೌಲ್ಯಮಾಪನ, ಸಾರ್ವಜನಿಕ ಸಾಲ ಮತ್ತು ಸರ್ಕಾರದ ಲೆಕ್ಕಪತ್ರಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒಳಗೊಂಡಿದೆ.

 

ಅನುಕ್ರಮಣಿಕೆ ಮತ್ತು ವರ್ಗೀಕರಣ

ದಾಖಲೆಗಳ ಸಂಸ್ಕರಣೆಗೆ ಡೀವಿ ದಶಮಾಂಶ ವರ್ಗೀಕರಣ (DDC) ವಿಧಾನವನ್ನು ಅಳವಡಿಸಲಾಗಿದೆ. ಇ-ಗ್ರಂಥಾಲಯ ತಂತ್ರಾಂಶವನ್ನು ಬಳಸಿ ಎಲ್ಲಾ ದಾಖಲೆಗಳನ್ನು ಗಣಕೀಕೃತ ಗ್ರಂಥ ವಿವರಣಾ ಪಟ್ಟಿಯ ನಿಯಂತ್ರಣಕ್ಕೆ ತರಲಾಗಿದೆ. ಓದುಗರಿಗಾಗಿ ಆನ್‍ಲೈನ್ ಪಬ್ಲಿಕ್ ಆಕ್ಸೆಸ್ ಕ್ಯಾಟಲಾಗ್ ನ್ನು (OPAC) ಒದಗಿಸಲಾಗಿದೆ. ಇದರ ಸಹಾಯದಿಂದ ಲೇಖಕರು, ಶೀರ್ಷಿಕೆ, ವಿಷಯ, ವರ್ಗಸಂಖ್ಯೆ, ಪ್ರಕಾಶಕರು ಅಥವಾ ಶೀರ್ಷಿಕೆಯಲ್ಲಿನ ಪದಗಳ ಮೂಲಕ ಹುಡುಕಬಹುದು. ಹೊಸದಾಗಿ ಸೇರ್ಪಡೆಯಾದ ಪುಸ್ತಕ ಮತ್ತು ಪತ್ರಿಕೆಗಳನ್ನು ವಾರಕ್ಕೊಮ್ಮೆ ಪ್ರದರ್ಶಿಸಲಾಗುತ್ತದೆ. ಪುಸ್ತಕ ಪ್ರದರ್ಶನದ ದಿನಾಂಕ ಮುಗಿದ ಬಳಿಕ ಎರವಲು ಪಡೆಯಬಹುದು.

 

ಗ್ರಂಥಾಲಯದ ವೇಳೆ

ಗ್ರಂಥಾಲಯದ ಸಮಯ : ಬೆಳಿಗ್ಗೆ 10.00ರಿಂದ ಸಂಜೆ 05.30ರ ವರೆಗೆ
ತರಬೇತಿದಿನಗಳಲ್ಲಿ : ಬೆಳಿಗ್ಗೆ 09.00ರಿಂದ ರಾತ್ರಿ 07.00ರ ವರೆಗೆ

 

ಗ್ರಂಥಾಲಯದ ಸಿಬ್ಬಂದಿ

ಕ್ರಮ ಸಂಖ್ಯೆ . ಹೆಸರು ಪದನಾಮ ದೂರವಾಣಿ ಸಂಖ್ಯೆ . ಇ – ಮೇಲ್
1 ಪದ್ಮನಾಭ ವಿ. ಗ್ರಂಥಪಾಲಕರು 080-26971014 libfpi@gmail.com
2 ಬೋರಯ್ಯ ಎಸ್ ಸಹಾಯಕ ಗ್ರಂಥಪಾಲಕರು 080-26973102 s.boraiah@yahoo.co.in

 

ಸಂಪರ್ಕಿಸಲು :-

ಗ್ರಂಥಪಾಲಕರು
ವಿತ್ತೀಯ ಕಾರ್ಯನೀತಿ ಸಂಸ್ಥೆ,
ಬೆಂಗಳೂರು-ಮೈಸೂರು ಮುಖ್ಯ ರಸ್ತೆ, ಕೆಂಗೇರಿ, ಬೆಂಗಳೂರು-560060.
ದೂರವಾಣಿ ಸಂಖ್ಯೆ: 080- 26971014 (ಗ್ರಂಥಾಲಯ), 26971000 (ಕಛೇರಿ)
ಇ – ಮೇಲ್ : libfpi@gmail.com
ವೆಬ್ ಸೈಟ್ : fpibangalore@gov.in

 

[ ಹೆಚ್ಚು ಓದಲು ..... ಮುಂದುವರೆಸಿ]