ವಿಕಾಸಂನ ಲಾಂಛನ ಕುರಿತು

FPI Logo

ವಿತ್ತೀಯ ಕಾರ್ಯನೀತಿ ಸಂಸ್ಥೆಯು ವಿಶೇಷವಾದ ಜ್ಞಾನ ಕೇಂದ್ರವಾಗಿದ್ದು ವಿತ್ತೀಯ ವಿಷಯಗಳನ್ನು ಹೆಚ್ಚು ಹೆಚ್ಚಾಗಿ ಅರ್ಥೈಸಿಕೊಳ್ಳಲು ಮತ್ತು ಸಾರ್ವಜನಿಕ ಸೇವೆಗಳು ತಲುಪುವ ಪರಿಣಾಮಕಾರಿತ್ವವನ್ನು ವೃದ್ಧಿಸುವ ಕಾರ್ಯ ಮಾಡುತ್ತಿದೆ. ಸ್ಥಳೀಯ ಸಂಸ್ಥೆಗಳನ್ನು ಒಳಗೊಂಡಂತೆ ರಾಜ್ಯ ಮತ್ತು ಇತರೆ ರಾಜ್ಯದ ಇಲಾಖೆಗಳ ವಿತ್ತೀಯ ನಿರ್ವಹಣೆಯ ನೀತಿ ನಿರೂಪಣೆ ಮತ್ತು ಕಾರ್ಯಾಚರಣೆಯ ಕ್ಷೇತ್ರಗಳೆರಡರಲ್ಲೂ ವಿಶಿಷ್ಟವಾದ ಮತ್ತು ಶಾಶ್ವತವಾದ ಕೊಡುಗೆಯನ್ನು ನೀಡುವ ಮಹತ್ವಾಕಾಂಕ್ಷೆಯ ದೃಷ್ಟಿಕೋನದೊಂದಿಗೆ ವಿತ್ತೀಯ ಕಾರ್ಯನೀತಿ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಹೊಂದಾಣಿಕೆಯಾಗುವ ಜ್ಞಾನ, ಪರಿಣಿತಿ, ಅನುಭವ, ಕಾರ್ಯಚರಣೆಯ ಕೌಶಲ್ಯ ಮತ್ತು ಸರಿಹೊಂದುವ ವ್ಯವಸ್ಥೆಯನ್ನು ಅಳವಡಿಸಿಕೊಂಡು ಅದನ್ನು ಪ್ರಚುರ ಪಡಿಸುವ ಸಾಮಥ್ರ್ಯ ಹೊಂದಿರುವ ಮಾನವ ಸಂಪನ್ಮೂಲವನ್ನು ಹೊಂದುವುದು ಸಂಸ್ಥೆಯ ಆತಂರಿಕ ಉದ್ದೇಶ.

ಸಂಸ್ಥೆಯ ಲಾಂಛನವು ಸರಳ ಹಾಗೂ ವಿಶಿಷ್ಟ ಭಾರತೀಯ ತತ್ವಗಳನ್ನು ಒಳಗೊಂಡ ಕಲಾತ್ಮಕ ವಿನ್ಯಾಸವನ್ನು ಹೊಂದಿದ್ದು, ಸಂಸ್ಥೆಯ ಗುರಿಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಅದರ ಜೊತೆಗೆ ಲಾಂಛನವು ಸಂಸ್ಥೆ ಮತ್ತು ಅದರ ಸಿಬ್ಬಂದಿಗಳಿಗೆ ವಿತ್ತೀಯ ಹೊಣೆಗಾರಿಕೆಯೆಡೆಗೆ ತಮ್ಮ ಸರ್ವ ಪ್ರಯತ್ನವನ್ನು ಕೇಂದ್ರೀಕರಿಸಲು ನೆನಪಿಸುತ್ತದೆ.

ಲಾಂಛನದ ವಿವಿಧ ಆಯಾಮಗಳ ಸಂಕ್ಷೀಪ್ತ ವಿವರಣೆ :

  • ಲಾಂಛನದ ವಿನ್ಯಾಸವು ಸಿಂಧೂ ನಾಗರೀಕತೆಯ ಸಮಯದಲ್ಲಿ ಬಳಸುತ್ತಿದ್ದ ಟೆರ್ರಕೋಟಾ ಮುದ್ರೆಗಳ ಸಾಂಕೇತಿಕ ಪ್ರತಿನಿಧಿತ್ವ ಹೊಂದಿದೆ.
  • ಲಾಂಛನದಲ್ಲಿರುವ ತಾಮ್ರ ಮತ್ತು ಚಿನ್ನಮಿಶ್ರಿತ ಹಳದಿ ಬಣ್ಣ ಪ್ರಾಚೀನ ಭಾರತದ ನಾಣ್ಯಯುಗವನ್ನು ಪ್ರತಿನಿಧಿಸುತ್ತದೆ
  • ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯ್ದೆ, 2002ರ 4(1)ನೇ ಪ್ರಕರಣದಲ್ಲಿರುವ 17 ವಿತ್ತೀಯ ನಿರ್ವಹಣಾ ತತ್ವಗಳನ್ನು 17 ‘ಎಫ್’ ಗಳು ಪ್ರತಿನಿಧಿಸುತ್ತವೆ
  • ಲಾಂಛನದ ಪರಿಕಲ್ಪನೆಯೇ ನಿರಂತರ ಚಲನೆ ಮತ್ತು ತನ್ನೊಳಗಿನ ಸ್ಥಿರತೆಯನ್ನು ಬಿಂಬಿಸುತ್ತದೆ.