ವಿಕಾಸಂ ಪರಿಚಯ

ವಿತ್ತೀಯ ಕಾರ್ಯನೀತಿ ಸಂಸ್ಥೆಯನ್ನು ಸರ್ಕಾರವು 2007 ಸ್ಥಾಪಿಸಿತು. ವಿತ್ತೀಯ ಕಾರ್ಯನೀತಿ ಸಂಸ್ಥೆಯನ್ನು ಸ್ಥಾಪಿಸುವುದರ ಮೂಲಕ ಕರ್ನಾಟಕ ಸರ್ಕಾರವು ವಿತ್ತೀಯ ಹೊಣೆಗಾರಿಕೆ ಕಾಯ್ದೆಯನ್ನು -2002 ಸಾಂಸ್ಥೀಕರಿಸುವ ಬದ್ಧತೆಯನ್ನು ತೋರಿಸಿತು. ವಿತ್ತೀಯ ಕಾರ್ಯನೀತಿ ಸಂಸ್ಥೆಯ ಚಟುವಟಿಕೆಗಳು ಮತ್ತು ಸೇವೆಗಳು, ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ, 2002ರ 4ನೇ ಪ್ರಕರಣದ ಉಪಬಂಧಗಳ ಮೇರೆಗಿನ ವಿತ್ತೀಯ ನಿರ್ವಹಣೆಯ ಹದಿನೇಳು ತತ್ವಗಳ ಆಶಯವನ್ನು ಅಳವಡಿಸಿಕೊಳ್ಳುವುದನ್ನು ಅಪೇಕ್ಷಿ¸ಸುತ್ತದೆ. ಇವುಗಳನ್ನು ಕೆಳಗಿನ ನಾಲ್ಕು ವಿಧಾನಗಳ ಮೂಲಕ ಸಾಧಿಸಲಾಗುವುದು.

  1. ಅಗತ್ಯಕ್ಕೆ ತಕ್ಕಂತೆ ತರಬೇತಿ ಮತ್ತು ಹಾಗೆ ತರಬೇತಿ ಪಡೆದುಕೊಂಡವರಿಗೆ ನಿರಂತರವಾಗಿ ನೆರವು ನೀಡುವುದು.
  2. ಸಾರ್ವಜನಿಕ ಖಾಸಗಿ ಸಹಭಾಗಿತ್ವಗಳು (PPPs) ಸರಕು ಮತ್ತು ಸೇವಾ ತೆರಿಗೆಗಳು (GST), ಪರಿಸರ ಅರ್ಥಶಾಸ್ತ್ರ, ಆರೋಗ್ಯ ಅರ್ಥಶಾಸ್ತ್ರ ಮೊದಲಾದ ನೂತನ ಮತ್ತು ಸವಾಲಿನ ಕ್ಷೇತ್ರಗಳ ಜೊತೆಗೆ ಸಾಂಪ್ರದಾಯಕ ಕ್ಷೇತ್ರಗಳಿಗೆ ಸಮಾಲೋಚನಾ ಸೇವೆ ಮತ್ತು ತರಬೇತಿಯನ್ನು ನೀಡುವುದು.
  3. ದತ್ತಾಂಶ ಬ್ಯಾಂಕನ್ನು ಸೃಜಿಸುವುದು ಮತ್ತು ನಿರ್ವಹಿಸುವುದಕ್ಕೆ ಸಂಬಂಧಿಸಿದಂತೆ ಇಲಾಖೆಗಳಿಗೆ ನೆರವು ನೀಡುವುದೂ ಸೇರಿದಂತೆ ದತ್ತಾಂಶ ಕೋಶದ ನಿರ್ವಹಣೆ ಮಾಡುವುದು, ಮತ್ತು
  4. ವಿತ್ತೀಯ ನಿರ್ವಹಣೆ ತತ್ವಗಳು ಮತ್ತು ಹೊಣೆಗಾರಿಕೆಗೆ ಸಂಬಂಧಿಸಿದ ಸಲಹೆ ಮತ್ತು ನೆರವು ನೀಡುವುದು.