ದೃಷ್ಟಿಕೋನ ಮತ್ತು ಗುರಿಗಳು

 

ದೃಷ್ಟಿಕೋನ

ವಿತ್ತೀಯ ಕಾರ್ಯನೀತಿ ಸಂಸ್ಥೆಯ ಮೂಲಕ ಹೂಡಿಕೆಯಾಗುವ ಸಂಪನ್ಮೂಲಗಳು ಸಾರ್ವಜನಿಕ ಸೇವಾ ನೀಡಿಕೆಯಲ್ಲಿ ತೊಡಗಿಸಲಾಗುವ ಮಾನವ ಬಂಡವಾಳದ ಗುಣಮಟ್ಟವನ್ನು ಹೆಚ್ಚಿಸುತ್ತವೆ. ಇದರ ಪ್ರತಿಫಲವಾಗಿ ಅವುಗಳ ಕಾರ್ಯಕ್ಷಮತೆ ಹೆಚ್ಚುತ್ತದೆ, ಸಮಗ್ರ ವಿವೇಕಯುತ ವಿತ್ತೀಯ ಮಾದರಿ ಸೂತ್ರಗಳನ್ನು ಅನುಸರಿಸುವ ಹವ್ಯಾಸಕ್ಕೆ ಉತ್ತೇಜನ ನೀಡಿದಂತಾಗುತ್ತದೆ ಮತ್ತು ಎಲ್ಲಾ ಸಮಯದಲ್ಲೂ ನಾಗರೀಕರ ಹಣಕ್ಕೆ ಮೌಲ್ಯವನ್ನು ಖಚಿತಪಡಿಸುತ್ತದೆ.

 

ಗುರಿಗಳು

ವಿತ್ತೀಯ ಕಾರ್ಯನೀತಿ ಸಂಸ್ಥೆಯು ವಿತ್ತೀಯ ಹೊಣೆಗಾರಿಕೆ ಮತ್ತು ಆಯವ್ಯಯ ನಿರ್ವಹಣೆ ಕಾಯ್ದೆ 2003 ಹಾಗೂ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯ್ದೆ , 2002 ರಲ್ಲಿನ ಶಾಸನಾತ್ಮಕ ಉದ್ದೇಶಗಳಿಗೆ ಸಂಬಂಧಿಸಿದಂತೆ ವಿತ್ತೀಯ ಹೊಣೆಗಾರಿಕೆ ಪ್ರಜ್ಞೆಯನ್ನು ಮೈಗೂಡಿಸಿಕೊಳ್ಳುವ ಮತ್ತು ಅದಕ್ಕೆ ಸರಿಹೊಂದುವಂತಹ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಎಲ್ಲಾ ಸಾರ್ವಜನಿಕ ವಲಯದ ಆಡಳಿತ ಘಟಕಗಳಿಗೆ ಸಮಾಲೋಚಕ ಹಾಗೂ ಕೈ ಆಸರೆಯಾಗುವ ಪ್ರಥಮ ಉಲ್ಲೇಖಾರ್ಹ ಸಂಸ್ಥೆಯಾಗಿ ನಿಲ್ಲುವ, ಅಲ್ಲದೆ, ಅದರಲ್ಲೂ ನಿರ್ದಿಷ್ಟವಾಗಿ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಅನುಚ್ಛೇದ 4ರ ಅಡಿಯಲ್ಲಿ ಪ್ರತಿಪಾದಿಸಿರುವ ವಿತ್ತೀಯ ನಿರ್ವಹಣಾ ತತ್ವಗಳಿಗನುಸಾರವಾಗಿ 2015ರ ವೇಳೆಗೆ ಸಂಸ್ಥೆಯ ಗುರಿಯನ್ನು ತಾಲ್ಲೂಕು ಕೇಂದ್ರಗಳವರೆಗೆ ವಿಸ್ತರಿಸುವ ಗುರಿಯನ್ನು ಹೊಂದಿದೆ. ನಂತರ ಸಂಸ್ಥೆಯು ದಕ್ಷತೆಯಿಂದ ಕಾರ್ಯಗಳನ್ನು ಮುಂದುವರೆಸಿ, ಬಳಕೆದಾರರಿಗೆ ಮತ್ತು ಸರ್ಕಾರಕ್ಕೆ ಯೋಗ್ಯ ಮತ್ತು ಕೈಗೆಟುಕುವ ದರದಲ್ಲಿ ಸೇವೆಗಳನ್ನು ಒದಗಿಸಿ, 2016ರೊಳಗೆ ಸ್ವಯಂ ಲಾಭದಾಯಕ ಸಂಸ್ಥೆಯಾಗುವ ಗುರಿಯನ್ನು ಹೊಂದಿದೆ.