ಸಂಶೋಧನೆ, ಸಲಹೆ ಮತ್ತು ಪ್ರಶಿಕ್ಷಣ (ಶಿಶಿಕ್ಷು)

ಸಂಶೋಧನ ಸಲಹೆಗಾರರು/ ಸಂಶೋಧನ ಸಹಾಯಕರ ನೀತಿ

ಅಲ್ಪಾವಧಿ ಸಲಹಾ ನೀತಿ:

ವಿತ್ತೀಯ ಕಾರ್ಯನೀತಿ ಸಂಸ್ಥೆಯು ಆಂತರಿಕ ಪರಿಣಿತರಿಗೆ ಬೆಂಬಲ ಹಾಗೂ ಪೂರಕವಾಗಿ ಸಂಶೋಧನಾ ಉಪಕ್ರಮಗಳು ಮತ್ತು ಸಂಶೋಧನೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ಬಲಪಡಿಸಲು, ಅಲ್ಪಾವಧಿ ಸಲಹಾ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ನಿರ್ದಿಷ್ಟ ಸಮಯದ ಚೌಕಟ್ಟನ್ನು ಹೊಂದಿದ ಸ್ಪಷ್ಟವಾಗಿ ಗುರುತಿಸಲಾದ ಕೆಲಸದ ವ್ಯಾಪ್ತಿಯೊಳಗೆ ಸಂಬಂಧಿಸಿದ ಸಂಶೋಧನಾ ದಾಖಲಾತಿ ಮತ್ತು ಫಲಿತಾಂಶಗಳನ್ನು ಗುರಿಯಾಗಿಸಿಕೊಂಡ ನಿರ್ದಿಷ್ಟ ಸೇವೆ ಒದಗಿಸುವ ಅತ್ಯಂತ ಅರ್ಹ ಶೈಕ್ಷಣಿಕ ಮತ್ತು ತಾಂತ್ರಿಕ ಸೇವೆಗಾಗಿ ಅಲ್ಪಾವಧಿ ಸಲಹಾ ಸೇವೆಗಳ ಅಗತ್ಯತೆ ಇರುತ್ತದೆ. ಇದು ಅಲ್ಪಾವಧಿ ಸಲಹಾಗಾರರಿಗೆ ಸರ್ಕಾರಿ/ಸಾರ್ವಜನಿಕ ಆಡಳಿತದಲ್ಲಿ ಸಂಶೋಧನೆ ನಡೆಸಲು, ಅನುಭವಾತ್ಮಕ ಕಲಿಕೆ ಗಳಿಸಲು ಅವಕಾಶ ನೀಡುತ್ತದೆ.