ಧ್ಯೇಯೋದ್ದೇಶ

 

      ವಿ.ಕಾ.ಸಂ. ಯ ಪ್ರಮುಖ ಉದ್ದೇಶಗಳೆಂದರೆ:

  • ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿಗಳ/ಸಿಬ್ಬಂದಿ ವರ್ಗದ ಅಗತ್ಯಕ್ಕೆ ಅನುಗುಣವಾಗಿ ವಿತ್ತೀಯ ವಿಷಯಗಳಲ್ಲಿ ತರಬೇತಿ ನೀಡುವುದು ಮತ್ತು ವಿತ್ತೀಯ ವಿವೇಚನೆ ಕುರಿತು ಒತ್ತು ನೀಡುವುದರೊಂದಿಗೆ ಹಣಕಾಸು ಯೋಜನೆ, ಕಾರ್ಯಕ್ರಮ ಅನುಷ್ಠಾನ, ಸಾರ್ವಜನಿಕ ವೆಚ್ಚ ಹಾಗೂ ಸ್ವತ್ತು ನಿರ್ವಹಣೆಯ ವಿವಿಧ ಅಂಶಗಳ ಬಗ್ಗೆ ಸಮರ್ಪಕವಾದ ಸಂಶೋಧನಾ ವರದಿ ತಯಾರಿಸುವುದು.
  • ಬೇಡಿಕೆಗೆ ಅನುಗುಣವಾಗಿ, ಮತ್ತು ಸ್ವ ಇಚ್ಛೆಯಿಂದ ಸರ್ಕಾರಕ್ಕೆ ಮತ್ತು ಇತರ ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ಸಂಬಂಧಿಸಿದ ಜರೂರಾದ ಮತ್ತು ದೀರ್ಘಕಾಲ ಪ್ರಸ್ತುತವಾದ ವಿಶೇಷ ಸಂಶೋಧನೆ ಮತ್ತು ಅಧ್ಯಯನವನ್ನು ಕೈಗೊಳ್ಳುವುದು.
  • ಕಾರ್ಯನೀತಿ ವಿಶ್ಲೇಷಣೆ, ಹೂಡಿಕೆಯ ಮೌಲ್ಯಮಾಪನ, ಸಂಭವನೀಯ ಅಪಾಯ ನಿರ್ಧಾರಣೆ ಮತ್ತು ಸಾಧನೆಯ ಮೇಲ್ವಿಚಾರಣೆಯ ವಿಧಾನಗಳಿಗೆ ಉಪಯೋಗ ಸ್ನೇಹಿ ಆಕರ ಕೈಪಿಡಿಗಳು, ನಮೂನೆಗಳು, ಸಾಧನ-ಸಲಕರಣೆಗಳು ಮತ್ತು ಮಾನದಂಡಗಳನ್ನು ತಯಾರಿಸುವುದು ಹಾಗೂ ಅವುಗಳನ್ನು ಸಾಂಸ್ಥೀಕರಿಸುವುದು.
  • ಸರ್ಕಾರದ ಕಾರ್ಯಚರಣೆಗಳಲ್ಲಿ ಉತ್ತಮ ಆರ್ಥಿಕ ಆಡಳಿತಕ್ಕೆ ಸಂಬಂಧಿಸಿದ ಅತ್ಯುತ್ತಮ ಆಚರಣೆಗಳನ್ನು ಗ್ರಹಿಸಿ, ದಾಖಲಿಸಿ ಪ್ರಚುರ ಪಡಿಸುವುದು ಮತ್ತು ವೆಚ್ಚಮಾಡಿದ ಹಣದ ಮೌಲ್ಯವನ್ನು ಖಾತ್ರಿಪಡಿಸಲು ಇಲಾಖೆಗೆ ನೆರವಾಗುವುದು.
  • ತರಬೇತಿ ಮತ್ತು ಸಂಶೋಧನೆಯನ್ನು ಸಮರ್ಥವಾಗಿ ನಿರ್ವಹಿಸಲು ಅಗತ್ಯವಿರುವ ಭೌತಿಕ ಮೂಲಸೌಕರ್ಯಗಳು ಮತ್ತು ನಿರ್ವಹಣಾ ಸಂಪನ್ಮೂಲಗಳನ್ನು ನಿರಂತರವಾಗಿ ಒದಗಿಸುವುದು ಮತ್ತು ನಿರ್ವಹಿಸುವುದು.