ಉಗಮ

ಕರ್ನಾಟಕ ರಾಜ್ಯವು ವಿತ್ತೀಯ ಹೊಣೆಗಾರಿಕೆ ಕಾಯ್ದೆ ಯನ್ನು ಜಾರಿಗೊಳಿಸಿದ ಭಾರತದ ಮೊಟ್ಟಮೊದಲ (2002 ರಲ್ಲಿ) ರಾಜ್ಯವಾಗಿದೆ. ಭಾರತದ ವಿತ್ತೀಯ ಸುಧಾರಣಾ ಯೋಜನೆ-ಯುಎಸ್‍ಎಐಡಿ ಯಲ್ಲಿ ಪಡೆದ ಅನುಭವದ ಹಿನ್ನಲೆಯಲ್ಲಿ, ರಾಜ್ಯವು ವಿತ್ತೀಯ ಕಾರ್ಯನೀತಿ ಸಂಸ್ಥೆಯ ಅಗತ್ಯತೆಯನ್ನು ಮನಗಂಡಿತು. ಭಾರತ ಸರ್ಕಾರದಿಂದ ಆರಂಭಿಕ ಯೋಜನಾ ಅನುದಾನವನ್ನು ಪಡೆದು 2007 ರಲ್ಲಿ ಕರ್ನಾಟಕ ಸರ್ಕಾರ ವಿತ್ತೀಯ ಕಾರ್ಯನೀತಿ ಸಂಸ್ಥೆಯನ್ನು ಸ್ಥಾಪಿಸಿತು. ವಿತ್ತೀಯ ಕಾರ್ಯನೀತಿ ಸಂಸ್ಥೆಯನ್ನು ಸ್ಥಾಪಿಸುವುದರ ಮೂಲಕ ಕರ್ನಾಟಕ ಸರ್ಕಾರ ಈ ಕಾಯ್ದೆಯನ್ನು ಸಾಂಸ್ಥೀಕರಿಸುವ ಬದ್ಧತೆಯನ್ನು ತೋರಿಸಿತು. ಅದರಂತೆ ಪ್ರಾರಂಭವಾದ ವಿತ್ತೀಯ ಕಾರ್ಯನೀತಿ ಸಂಸ್ಥೆ ಕರ್ನಾಟಕ ಸರ್ಕಾರಕ್ಕೆ ಈ ಕೆಳಕಂಡ ವಿಷಯಗಳಲ್ಲಿ ತನ್ನ ಸಹಾಯವನ್ನು ನೀಡಲಿದೆ:

  • ರಾಜ್ಯ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ನಿರ್ಣಯಗಳನ್ನು ಕೈಗೊಳ್ಳಲು ಮಾಹಿತಿಯ ಲಭ್ಯತೆಯನ್ನು ಹೆಚ್ಚಿಸುವುದು.
  • ನಿರ್ಣಯಗಳನ್ನು ಕೈಗೊಳ್ಳುವ ಪ್ರಕ್ರಿಯೆಯು ಏಕರೂಪ ಮತ್ತು ಪಾರದರ್ಶಕ ತತ್ವವನ್ನು ಪಾಲಿಸಿರುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಆರ್ಥಿಕ ಆಡಳಿತದಲ್ಲಿ ಹೊಣೆಗಾರಿಕೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವುದು.
  • ಸಂಬಂಧಪಟ್ಟ ಸಂಸ್ಥೆಗಳ ಸಾಮಥ್ರ್ಯವನ್ನು ನಿರಂತರವಾಗಿ ಉನ್ನತೀಕರಿಸಲು ವಿತ್ತೀಯ ಸುಧಾರಣಾ ಪಥವನ್ನು ಸುಸ್ಥಿರಗೊಳಿಸುವುದು.