ಸಂಸ್ಥೆಯ ಆವರಣದಲ್ಲಿನ ಮೂಲಸೌಕರ್ಯಗಳು

ವಿಕಾಸಂ ಆವರಣ

ವಿಕಾಸಂ 5.30 ಎಕರೆ ವಿಸ್ತೀರ್ಣದಲ್ಲಿದ್ದು, ಬೆಂಗಳೂರಿನ ದಕ್ಷಿಣ ಭಾಗದ ಬೆಂಗಳೂರು ಮೈಸೂರು ರಸ್ತೆಯ ಕೆಂಗೇರಿ ಸಮೀಪದಲ್ಲಿದೆ. ನಗರದ ಮುಖ್ಯ ಬಸ್ ನಿಲ್ದಾಣ (ಮೆಜೆಸ್ಟಿಕ್)ದಿಂದ ಸುಮಾರು 15 ಕಿ.ಮೀ. ದೂರದಲ್ಲಿದೆ. ವಿಕಾಸಂ ಕಲಿಕೆ ಮತ್ತು ವಸತಿ ಸೌಕರ್ಯಗಳನ್ನು ಒಳಗೊಂಡಿರುವ 7 ಕಟ್ಟಡಗಳನ್ನು ಹೊಂದಿದೆ.

   

ಸಂಸ್ಥೆ ಹೊಂದಿರುವ ಕಲಿಕಾ ಸೌಲಭ್ಯಗಳು;

ಚರ್ಚಾ ಕೊಠಡಿಗಳು

ಕಲಿಕಾರ್ಥಿಗಳಿಗೆ ಅನುಕೂಲವಾಗುವ ಕಲಿಕಾ ಪರಿಸರವನ್ನು ಸೃಷ್ಟಿಸುವ ರೀತಿಯಲ್ಲಿ ಎಲ್ಲಾ 7 ಕೊಠಡಿಗಳನ್ನು ವಿನ್ಯಾಸಗೊಳಿಸಿದ್ದು, ಉತ್ತಮ ಗಾಳಿ, ಬೆಳಕಿನ ವ್ಯವಸ್ಥೆ, ಹೊಂದಿಕೊಳ್ಳುವ ಆಸನ ವ್ಯವಸ್ಥೆ, ಲ್ಯಾನ್, ಎಲ್‍ಸಿಡಿ ಪ್ರೊಜೆಕ್ಟರ್ ಮುಂತಾದ ಸೌಲಭ್ಯಗಳನ್ನು ಒದಗಿಸಲಾಗಿದೆ.

 

ಗ್ರಂಥಾಲಯ

ಸಾಂಪ್ರದಾಯಿಕ ಮತ್ತು ಡಿಜಿಟಲ್ ವ್ಯವಸ್ಥೆ ಎರಡನ್ನೂ ಒಳಗೊಂಡ ವಿಶಿಷ್ಟವಾದ ಜ್ಞಾನ ಕೇಂದ್ರ ಇದಾಗಿದೆ. ಚರ್ಚಾಕೊಠಡಿ, ವಸತಿನಿಲಯ ಮತ್ತು ಅತಿಥಿಗೃಹದಲ್ಲಿರುವ ಲ್ಯಾನ್ ವ್ಯವಸ್ಥೆಯಿಂದಾಗಿ ದಿನದ ಎಲ್ಲಾ ಸಮಯದಲ್ಲೂ ಗ್ರಂಥಾಲಯದ ಸೌಲಭ್ಯ ಪಡೆಯಬಹುದಾಗಿದೆ.

 

ಅಂತರ್ಜಾಲ ಸೌಲಭ್ಯ

ದಿನದ 24 ಗಂಟೆಗಳ ಕಾಲ ಲಭ್ಯವಿರುವ ಅಂರ್ತಜಾಲ ವ್ಯವಸ್ಥೆ, ಕೆಎಸ್‍ಡಬ್ಲ್ಯೂಎಎನ್ನ ಮೂಲಕ ಆಂತರಿಕ ಮತ್ತು ಅಂತರ್ ಸಂಸ್ಥೆ ಜಾಲಗಳನ್ನು ಸಂಪರ್ಕಿಸುವ ಸಾಮಥ್ರ್ಯ ಮತ್ತು ಇತರೆ ಕಂಪ್ಯೂಟರ್ ಉಪಕರಣಗಳು ತರಬೇತಿಗೆ ಸಹಾಯಕವಾಗಿದೆ.

 

ಸ್ಟುಡಿಯೋ

ಕಲಿಕಾ ಸಾಮಗ್ರಿಗಳನ್ನು ಆಂತರಿಕವಾಗಿ ನಿರ್ಮಿಸಲು ಹಾಗೂ ದೂರಶಿಕ್ಷಣಕ್ಕೆ ನೆರವಾಗಲು ಸಹಕಾರಿಯಾಗುವಂತೆ ಧ್ವನಿಗ್ರಹಣ ಸಾಮಥ್ರ್ಯವುಳ್ಳ ಪೂರ್ಣಪ್ರಮಾಣದ ಸ್ಟುಡಿಯೋ ಹೊಂದಿದೆ.

 

ಸಮ್ಮೇಳನ ಕೊಠಡಿ ಮತ್ತು ಸಭಾಂಗಣ

ತಲಾ 40 ಜನರು ಕುಳಿತುಕೊಳ್ಳಲು ಆಸನ ವ್ಯವಸ್ಥೆ ಇರುವ ಎರಡು ಸಮ್ಮೇಳನ ಕೊಠಡಿಗಳಿವೆ ಮತ್ತು 170 ಕುಳಿತುಕೊಳ್ಳಲು ಆಸನ ವ್ಯವಸ್ಥೆ ಇರುವ ಒಂದು ಸಭಾಂಗಣವಿದೆ.
 

ಅತಿಥಿ ಗೃಹ

ಅತಿಥಿ ಗೃಹದಲ್ಲಿ ಒಟ್ಟು ಹನ್ನೆರಡು ಕೊಠಡಿಗಳಿವೆ. ಇವುಗಳಲ್ಲಿ ಮೂರು ಕೊಠಡಿಗಳು ಅಡುಗೆ ಕೋಣೆಯ ಸೌಲಭ್ಯ ಹೊಂದಿವೆ. ಅಲ್ಲದೆ ಸಾಮಾನ್ಯ ಊಟದ ಕೋಣೆಯ ಸೌಲಭ್ಯ ಹೊಂದಿರುವ ಎರಡು ಹಾಸಿಗೆಗಳುಳ್ಳ ಒಂಬತ್ತು ಕೋಣೆಗಳು ಲಭ್ಯವಿವೆ.

 

ವಸತಿನಿಲಯ

ಕಲಿಕಾರ್ಥಿಗಳಿಗೆ ವಸತಿ ಸೌಕರ್ಯ ಕಲ್ಪಿಸುವ ಸಲುವಾಗಿ ವಿಕಾಸಂನಲ್ಲಿ ಎರಡು ಹಾಸಿಗೆಯ ಕೊಠಡಿಗಳನ್ನು ಹೊಂದಿರುವ ವಸತಿನಿಲಯದ ವ್ಯವಸ್ಥೆ ಇದೆ. ಈ ವಸತಿನಿಲಯವು ಸಾಮಾನ್ಯ ಊಟದ ಕೋಣೆ ಸೌಲಭ್ಯವನ್ನು ಒಳಗೊಂಡಿದೆ.